Back
ವಯಸ್ಕರ ಶಿಕ್ಷಣ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ವಯಸ್ಕರ ಶಿಕ್ಷಣ

ವಯಸ್ಕರ ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿ 1978 ರಿಂದ ಪ್ರಾರಂಭವಾಗಿದೆ.

ಇಲಾಖೆಯ ಉದ್ದೇಶಗಳು

ಜಿಲ್ಲೆಯಲ್ಲಿ ಸಾಕ್ಷರತೆ ಕಡಿಮೆ ಇರುವ ಗ್ರಾಮೀಣ ಭಾಗದ 15-60 ವರ್ಷದೊಳಗಿನ ವಯೋಮಾನದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾತರು ಮತ್ತು ಎಲ್ಲಾ ವರ್ಗದ ಅನಕ್ಷರಸ್ಥರನ್ನು ಸಮೀಕ್ಷೆಯ ಮೂಲಕ ಗುರುತಿಸಿ, ಅವರಿಗೆ ಸ್ವಯಂಸೇವಕರ ಮೂಲಕ ಅಕ್ಷರ ಕಲಿಸಿ ನವ ಸಾಕ್ಷರರನ್ನಾಗಿಸುವುದು. ನಮ್ಮ ಇಲಾಖೆಯ ಉದ್ದೇಶ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಮಹಿಳಾ ಸಾಕ್ಷರತೆ ಕಡಿಮೆ ಇರುವುದರಿಂದ ಶೇ.85 ರಷ್ಟು ಮಹಿಳೆಯರು ಮತ್ತು ಶೇ.15 ರಷ್ಟು ಪುರುಷ ಗುರುತಿಸಿ, ಅವರಿಗೆ ಸಾಮಾನ್ಯ ಓದು ಬರಹ ಲೆಕ್ಕಾಚಾರ ಕಲಿಸುವ ಆಶಯ ಹೊಂದಿದೆ.

ಈ ಇಲಾಖೆಯು ಇದುವರೆಗೆ ಕೇಂದ್ರ ಪುರಸ್ಕ್ರತ ಯೋಜನೆಗಳಾದ ಸಾಕ್ಷರ ಸನ್ಮಾನ, ಕಲಿಕೆ ಗಳಿಕೆ, ಕನ್ನಡ ನಾಡು ಸಾಕ್ಷರ ನಾಡು, ಮುಂದುವರಿಕೆ ಶಿಕ್ಷಣ,ಸಮಾನ ಶಿಕ್ಷಣ ಸಾಕ್ಷರ ಭಾರತ್ ಹೀಗೆ ಹಲವಾರು ಯೋಜನೆಗಳ ಮೂಲಕ ಅಕ್ಷರ ಕಲಿಸಿ ನವ ಸಾಕ್ಷರರನ್ನಾಗಿಸಿದೆ. ಈ ನವ ಸಾಕ್ಷರರಿಗೆ ಸಾಕ್ಷರತಾ ಶಿಬಿರಗಳನ್ನು ಏರ್ಪಡಿಸಿ, ಅವರ ಜೀವನ ಗುಣಮಟ್ಟವನ್ನು ಸುಧಾರಿಸಲು “ಸಾಕ್ಷರತಾ ಕೌಶಲಗಳ ಸ್ಥೀರೀಕರಣ ಮತ್ತು ಜೀವನ ಗುಣಮಟ್ಟ ಸುಧಾರಣ ಶಿಬಿರ” ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದು ಈ ಇಲಾಖೆಯ ಧ್ಯೇಯವಾಗಿದೆ

 

 

ಜಿಲ್ಲಾ ಕಛೇರಿ:

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ


#5/1, ವಿನೋಬಾ ರಸ್ತೆ
ಮಾನಸಗಂಗೋತ್ರಿ
ಮೈಸೂರು-570006
ದೂರವಾಣಿ ಸಂಖ್ಯೆ: 0821-2415063
ಇಮೇಲ್: zssmysore[at]gmail[dot]com

×
ABOUT DULT ORGANISATIONAL STRUCTURE PROJECTS